ತಿಲಕ ಹಚ್ಚಿದ್ದಕ್ಕೆ ಲಂಡನ್ ಶಾಲೆಯಲ್ಲಿ ಹಿಂದೂ ಬಾಲಕನಿಗೆ ತಾರತಮ್ಯ: ಘಟನೆಗೆ ಬ್ರಿಟನ್ನಲ್ಲಿನ ಹಿಂದೂ ಸಮುದಾಯಗಳ ಆಕ್ರೋಶ
ತಿಲಕ ಹಚ್ಚಿದ್ದಕ್ಕೆ ಲಂಡನ್ ಶಾಲೆಯಲ್ಲಿ ಹಿಂದೂ ಬಾಲಕನಿಗೆ ತಾರತಮ್ಯ: ಘಟನೆಗೆ ಬ್ರಿಟನ್ನಲ್ಲಿನ ಹಿಂದೂ ಸಮುದಾಯಗಳ ಆಕ್ರೋಶ
- Get link
- X
- Other Apps
ಒನ್ ಸ್ಟೋರಿ ಸೈಡ್
ಒಂದು ಊರಿನಲ್ಲಿ ಒಂದು ಪುಟ್ಟ ನಾಯಿ ವಾಸವಾಗಿತ್ತು.
ಆ ಊರಲ್ಲಿ ಎಲ್ಲ ರೀತಿಯ ಪ್ರಾಣಿಗಳಿಗೂ ಯಜಮಾನನಿದ್ದನು ಆದರೆ ಆ ಒಂದು ನಾಯಿಗೆ ಮಾತ್ರ ಯಾವುದೇ ಯಜಮಾನ ಇರಲಿಲ್ಲ. ಅದು ಅದರ ತಾಯಿಯಿಂದ ದೂರವಾಗಿತ್ತು. ಒಂದು ದಿನ ಆ ಒಂಟಿ ನಾಯಿ ಊರಿನ ಬೀದಿಗಳಲ್ಲಿ ಆಹಾರ ಕ್ಕಾಗಿ ಹುಡುಕಲು ಹೋದಾಗ ಅಲ್ಲಿ ಒಂದು ಮನೆಯ ಮುಂದೆ ದನಕರುಗಳನ್ನು ಕಟ್ಟಿ ಹಾಕಿದ್ದರು. ಅವುಗಳಿಗೆ ಆಹಾರ ನೀಡುತ್ತಿದ್ದರು. ಆಗ ಈ ನಾಯಿ ಪ್ರತಿದಿನದಂತೆ ಇದೆಲ್ಲ ನಮಗೆ ಎಲ್ಲೀ ಸಿಗಬೇಕು ನಮಗೂ ಇದಕ್ಕೂ ಸರಿಹೊಂದಿಲ್ಲ ಅಂತ ಮುಂದೆ ಕಾಣಿಸಿದ ಹೋಟೆಲ್ ನೋಡಿತು. ಆ ಹೋಟೆಲಿನಲ್ಲಿ ಉಳಿದ ಆಹಾರವನ್ನು ಪಕ್ಕದಲ್ಲಿ ಬಿಸಾಡುತ್ತಿದರು . ಆ ಪುಟ್ಟ ನಾಯಿ ಅದನ್ನು ನೋಡಿದ ಕೂಡಲೇ ತುಂಬಾ ಆನಂದವಾಯಿತು. ಅದು ಕೂಡಲೇ ಹೊಟ್ಟೆ ಹಸಿವನ್ನು ನೀಗಿಸಲು ಆಹಾರ ತಿನ್ನಲು ಓಡಿತು. ಆದರೆ ವಿಧಿಯಾಟ ಬೇರೆಯೇ ಇತ್ತು ಅನಿಸುತ್ತೆ, ನಾಯಿ ಇನ್ನೇನು ಮುದುರಿದ ಎಲೆಗಳಲ್ಲಿರುವ ಅಳಿದುಳಿದ ಆಹಾರವನ್ನು ಸೇವಿಸಬೇಕು ಎನ್ನುವಷ್ಟರಲ್ಲಿ ಹಿಂದೆಯಿಂದ ಬಂದ ಕಲ್ಲು ನಾಯಿಗೆ ಬಡಿಯಿತು. ಆ ಹೋಟೆಲಿನ ಕೆಲಸಗಾರರು ನಾಯಿಗೆ ಕಲ್ಲಿನಲ್ಲಿ ಹೊಡೆದಿದ್ದರು , ನಾಯಿ ಅಯ್ಯೋ ಎಂದು ನೋವಿನಿಂದ ಓಡುತ್ತಾ ಅವರಿಂದ ತಪ್ಪಿಸಿಕೊಂಡಿತು. ಆದರೆ ಆ ಕಲ್ಲಿನ ಏಟು ಅದಕ್ಕೆ ತಡೆದುಕೊಳ್ಳಲಾಗಲಿಲ್ಲ. ಅದು ಊರಿಂದ ದೂರ ಬಂದು ರಸ್ತೆ ಬದಿಯಲ್ಲೇ ಮಲಗಿತು. ಇತ್ತ ಸಂಜೆ ಹೋಟೆಲಿನಲ್ಲಿ ನಾಯಿಗೆ ಹೊಡೆದ ಕೆಲಸಗಾರರು ತಮ್ಮ ಕೆಲಸವನ್ನು ಮುಂದುವರೆಸುತ್ತಾ ಚೆಲ್ಲಾಪಿಲ್ಲಿ ಯಾಗಿದ್ದ ಆಹಾರವನ್ನು ತುಂಬಿಕೊಂಡು ಊರಿನ ಆಚೆ ಬಂದು ಬಿಸಾಡಿದರು. ಅವರು ಮತ್ತೆ ಹೋಟೆಲ್ಗೆ ಹೋದರು . ಅವರು ಬಿಸಾಡಿದ ಜಾಗದಿಂದ ಸ್ವಲ್ಪ ದೂರವಿದ್ದ ಆ ನಾಯಿಮರಿಯು ಈ ದೃಶ್ಯನೋಡಿ ತನ್ನಲೇ ಈ ಮನುಷ್ಯ ಎಷ್ಟು ಕೆಟ್ಟವನು ನಾನು ತಿನ್ನಲು ಹೋದಾಗ ಕಲ್ಲು ತಗೊಂಡ್ ಹೊಡೆದರು, ಈಗ ಇಲ್ಲಿತಂದು ಸುರಿದಿದ್ದಾರೆ. ಇವರಿಗೆ ಹಸಿವಿನ ಬೆಲೆ ಗೊತ್ತಿಲ್ಲ, ಗೊತ್ತಿದ್ರೆ ಯಾರು ಈ ರೀತಿ ನನ್ನ ಹೊಡೆದು ಕಳಿಸ್ತಾ ಇರ್ಲಿಲ್ಲ, ಇರ್ಲಿ ಎಂದು ಈಗಲಾದರೂ ನನಗೆ ಆಹಾರ ಸಿಗ್ತಲ್ಲ ಎಂದು ಖುಷಿಯಿಂದ ಆ ನಾಯಿಮರಿಯು ತನ್ನ ಹೊಟ್ಟೆ ತುಂಬಿಸಿಕೊಂಡಿತು. ಅದು ಈಗೆ ತನ್ನ ಪ್ರತಿದಿನ ಕಳೆಯುತ್ತಿತ್ತು, ಒಂದು ದಿನ ಆ ನಾಯಿಯು ರಸ್ತೆ ಬದಿಯಲ್ಲಿ ಆಹಾರ ಹುಡುಕುತ್ತಿದ್ದಾಗ, ಒಂದು ಪುಟ್ಟ ಹುಡುಗಿ ಅದನ್ನು ನೋಡಿದಳು, ಅವಳು ಅದನ್ನು ಎತ್ತಿ ಮುದ್ದಾಡಿದಳು. ಎಷ್ಟು ಚಂದ ಇದೆ ನಾಯಿಮರಿ so cute ಎಂದು ಅದನ್ನ ತಾನೇ ಸಾಕಲು ಮನೆಗೆ ಎತ್ತಿಕೊಂಡು ಬಂದಳು. ನಾಯಿಮರಿಯು ಆ ಹುಡುಗಿಯ ಕಾಳಜಿಯಿಂದ ತುಂಬಾ ಖುಷಿಯಿಂದ ಆ ಹುಡುಗಿ ಜೊತೆ ಬಾಲ ಅಲ್ಲಾಡಿಸುತ್ತಾ ಬಂದಿತು. ಆ ನಾಯಿಗೆ ಗೊತ್ತಿರಲಿಲ್ಲ ಇದು ಕೆಲವು ದಿನಗಳ ಹಿಂದೆ ತನ್ನನ್ನು ಕಲ್ಲಿನಲ್ಲಿ ಹೊಡೆದವನ ಮನೆ ಎಂದು. ಆ ಪುಟ್ಟ ಪೋರಿ ನಾಯಿಮರಿಯನ್ನು ಎತ್ತಿಕೊಂಡು ಮನೆಗೆ ಬಂದಾಗ ಮನೆಯಲ್ಲಿ ತಂದೆ ಇರಲಿಲ್ಲ ಅವರು ಕೆಲಸಕ್ಕೆ ಹೋಗಿದ್ದರು, ಕೇವಲ ತಾಯಿ ಮಾತ್ರ ಮನೆಯಲ್ಲಿದ್ದರು.ಅವರು ನಾಯಿಮರಿ ಯನ್ನು ಕಂಡು ಬಾಲಕಿಗೆ ಎಲ್ಲಿಂದ ತಂದೆ ಇದನ್ನ ಅಂತ ಕೇಳಿದಳು. ಆಗ ಅವಳು ರೋಡಲ್ಲಿ ಇತ್ತು ಮಮ್ಮಿ ನನಿಗೆ ತುಂಬಾ ಇಷ್ಟ ಆಯ್ತು ಅದಿಕ್ಕೆ ತಂದೆ, ಇದನ್ನು ನಮ್ಜೊತೇಲೆ ಇಟ್ಕೊಳೋಣ ಮಮ್ಮಿ ಪ್ಲೀಸ್ ಮಮ್ಮಿ ಅಂತ ಗೋಗರೆದಳು ಎಸ್ಟೇ ಆಗ್ಲಿ ತಾಯಿ ಹೃದಯ ಕರಗಿ ಸರಿ ನಿಮ್ಮ ಡ್ಯಾಡಿ ಬರಲಿ ಅವ್ರಾತ್ರನೇ ಕೇಳಿ ಹೇಳ್ತೀನಿ ಸರೀನಾ ಎಂದಳು.ಸ್ವಲ್ಪ ಸಮಯದಲ್ಲೇ ಮನೆಯ ಯಜಮಾನ ಬಂದನು ಅವನು ಇನ್ನೇನು ಮನೆಯೊಳಗೆ ಬರಬೇಕು ಎನ್ನುವಷ್ಟರಲ್ಲಿ, ಅವನ ಕಣ್ಣಿಗೆ ತಾನು ಮೊನ್ನೆ ಕಲ್ಲಿನಲ್ಲಿ ಒಡೆದ ನಾಯಿಮರಿ! ಎಂತಹ ಆಶ್ಚರ್ಯ! ಅವನಿಗೆ ಒಂದುಕ್ಷಣ ಅನಿಸಿತು, ಇದೇನು ತನನ್ನು ಒಡೆದಿದ್ದಕ್ಕೆ ಹುಡುಕಿಕೊಂಡೆನಾದರೂ ಬಂದೀತೇ. ಎಂದು. ಅಷ್ಟರಲ್ಲಿ ಅವನ ಮಗಳು ಡ್ಯಾಡಿ ಎಂದು ಕೂಗುತ್ತಾ ಬರುವುದು ಕಾಣಿಸಿತು , ಆತನಿಗಿದ್ದ ಅಷ್ಟೂ ದಣಿವು,ಆಯಾಸ, ಎಲ್ಲಾ ಮಾಯವಾಗಿ ಮಗಳನ್ನು ಖುಷಿಯಿಂದ ನೋಡಿದ , ಮಗಳ ಮುಗ್ಧಾಮುಖ ನೋಡುತ್ತಾ ಈ ನಾಯಿಮರಿಯನ್ನ ನೀನುತಂದೆಯ ಮಗಳೇ ಎಂದು ಕೇಳಿದನು.ಅದಕ್ಕೆ ಮಗಳು ಹೂಂ ಡ್ಯಾಡಿ ನಾನೇ ಇದನ್ನ ತಂದಿದ್ದು. ಪಾಪ ಡ್ಯಾಡಿ ಅದು ತುಂಬಾ ಹಸಿವಾಗಿತ್ತು ಅದಕ್ಕೆ ಊಟ ಹಾಕಿ ತಗೊಂಡು ಬಂದೆ. ಇದನ್ನ ಇನ್ಮೇಲೆ ನಾವೇ ಸಾಕೋಣ ಡ್ಯಾಡಿ ಎಂದು ಮುಗ್ಧ ಮನಸಿನಿಂದ ಹೇಳಿದರು. ಅದಕ್ಕೆ ಅವನು ಏನೂ ತೋಚದೆ ಕೊನೆಗೆ ಅವಳ ಹಟಕ್ಕೆ ಮಣಿದು . ಸರಿ ನಮ್ಜೊತೆಲೆ ಇರಲಿ ಎಂದು ಹೇಳಿದನು.
ಮಾರನೆಯದಿನ ಬೆಳಗ್ಗೆ ತಂದೆ ತನ್ನ ಕೆಲಸಕ್ಕೆ ಹೋಗುವಾಗ ಆಕಸ್ಮಿಕವಾಗಿ ನಾಯಿ ಮಾಡಿದ ಮೂತ್ರವನ್ನು ತುಳಿದ . ಅಯ್ಯೋ ಇದೇನಾಯ್ತು ಬೆಳಗ್ಗೆನೇ ಈ ಕರ್ಮನೆಲ್ಲ ಯಾರು ನೋಡೋರು ಅದಕ್ಕೆ ನಾನು ಇದೆಲ್ಲ ಬೇಡ ಅಂತ ಹೇಳಿದ್ದು ಎಂದು ಗೊಣಗುತ್ತಿದ್ದ, ಅಷ್ಟರಲ್ಲಿ ತಾಯಿ ಬಂದು ಸ್ವಲ್ಪ ಮೆಲ್ಲಗೆ ಮಾತಾಡಿ ಮಗಳು ಇನ್ನೂ ಮಲಗಿದ್ದಾಳೆ, ಅವ್ಳೇನಾದ್ರು ಕೇಳಿಸಿಕೊಂಡ್ರೆ ಅಳ್ತಾಳೆ ಅಷ್ಟೆ. ಅವಳಿಗೆ ಇಷ್ಟ ಅಂತಾನೆ ತಾನೇ ಈ ನಾಯಿಮರಿಯನ್ನ ಇಲ್ಲಿರೋಕೆ ಬಿಟ್ಟಿದ್ದು, ಈಗ ನೀವೇ ಈಗಂದ್ರೆ, ಇದನ್ನೆಲ್ಲಾ ಸಹಿಸಿಕೊಂಡು ಇರಬೇಕು ಅಷ್ಟೇ. ಇದನ್ನೆಲ್ಲಾ ನಾನು ಕ್ಲೀನ್ ಮಾಡ್ತೇನೆ ನೀವಿನ್ನು ಹೊರಡಿ ಎಂದಳು.
Comments
Post a Comment